ಕೃಷ್ಣ ಜನ್ಮಾಷ್ಠಮಿಯ ಹಾಡು
MG Vlogs Mysuru
0:00 / 0:00
ಕೃಷ್ಣ ಜನ್ಮಾಷ್ಠಮಿಯ ಹಾಡು
3 008 просмотров · 5 дней назад
MG Vlogs Mysuru
12,9 тыс. подписчиков
3 008 просмотров · 5 дней назад
||ನೀನೆ ಶಾಶ್ವತ||
ನಾರಾಯಣ ವಾಸುದೇವ ಕೃಷ್ಣ ಕೇಶವ
ವಾರಿಜಾಕ್ಷ ವೆಂಕಟೇಶ ಶರಣು ಮಾಧವ||ಪಲ್ಲ||
ದ್ವಾರಕಾ ಪುರಾಧೀಶ ರಂಗನಾಯಕ
ಘೋರ ದುರಿತ ದುಷ್ಟ ದೂರ ಸುಜನ ಪಾಲಕ||
ಮೂರು ಲೋಕದೊಡೆಯ ಮಹಾವಿಷ್ಣು ಜಯಜಯ
ಚಾರು ವದನ ಚರಿತ ಮಹಿಮ ತೋರು ಕರುಣೆಯ||೧||
ಮೂಲಪುರುಷ ವೈಕುಂಠ ಪುರನಿವಾಸನೇ
ಆಲದೆಲೆಯ ಮೇಲೆ ಮಲಗಿದಂಥ ದೇವನೇ||
ಬಾಲಕಷ್ಣನಾಗಿ ಬಂದ ಭವ ವಿನಾಶನೇ
ನೀಲವರ್ಣ ನಿರ್ವಿಕಲ್ಪ ನಿತ್ಯ ತೃಪ್ತನೇ||೨||
ವೇಣುನಾದ ಬಲು ವಿನೋದ ವೇದಗೋಚರ
ಕ್ಷೋಣಿ ಭಾರನಿಳುಹಲೆಂದು ಬಂದ ಮುರಹರ||
ದಾನವಾರಿ ಹೇ ಮುರಾರಿ ಗರುಡ ವಿಹಾರಿ
ದಾನ ಬೇಡಿ ಬಲಿಯ ಗರ್ವ ಮುರಿದ ಶೌರಿ||೩||
ವಾಸುದೇವ ವಿಶ್ವಪಾಲ ಹೇ ಮುಕುಂದನೇ
ಶೇಷ ಶಯನ ಶ್ರೀನಿವಾಸ ಶ್ರೀನಿಕೇತನೇ||
ವಾಸವಾರ್ಚಿತಾದಿ ದೇವ ದಿವಿಜ ವಂದ್ಯನೇ
ಮಾಸದಿರುವ ಭಕ್ತಿ ಕೊಡು ಭುವನ ಪಾಲನೇ||೪||
ವೇಣು ಗೋಪಾಲಕೃಷ್ಣ ಕರುಣಸಾಗರ
ಮೌನಿ ಜನರ ಹೃದಯ ವಾಸ ಜಯತು ಶ್ರೀಧರ||
ಬಾಣ ದನುಜ ಗರ್ವವನ್ನು ಮುರಿದ ಮೂರುತಿ
ಆನರೋತ್ತಮನ ರಥಕೆ ಆದೆ ಸಾರಥಿ||೫||
ಬಿಲ್ಲ ಹಬ್ಬದಲ್ಲಿ ಕಂಸನನ್ನು ಮಡುಹಿದೆ
ಗೊಲ್ಲನಾಗಿ ಸಕಲ ಸುಜನರನ್ನು ಸಲಹಿದೆ||
ಎಲ್ಲ ನಿನ್ನ ಮಾಯೆ ಕೃಷ್ಣ ಮೆರೆವ ಚಕ್ರದಿ
ಕೊಲ್ಲಿಸಿದೆ ಕೌರವಾದಿಗಳನು ಭವರದಿ||೬||
ಅಷ್ಟಮಿಯ ತಿಥಿಯೊಳುದಿಸಿ ಬಂದ ದೇವನೇ
ಶ್ರೇಷ್ಠ ಮೂರುತಿಯೆ ಕೃಷ್ಣ ನಿನಗೆ ವಂದನೇ||
ಪುಟ್ಟ ಪುಟ್ಟ ಹೆಜ್ಜೆಯಿಡವ ಬಾಲಕೃಷ್ಣನೇ
ಮೆಟ್ಟು ನಮ್ಮನೆಯ ಹೊಸಿಲ ಬಾರೊ ಕೃಷ್ಣನೇ||೭||
ಚೋರನೆಂದು ಪೋರನೆಂದು ಕರೆದರೆಲ್ಲರು
ಶೌರಿ ನಿನ್ನ ನಾಟಕವನಾರು ಬಲ್ಲರು?||
ಮೂರು ಲೋಕದೊಡೆಯ ನಿನ್ನ ಮಹಿಮೆಯದ್ಭುತ
ಬೇರೆ ದಾರಿಯಿಲ್ಲವೆಮಗೆ ನೀನೆ ಶಾಶ್ವತ||೮||
**************************************
ನರಸಿಂಹ ಹೆಬ್ಬಾರ
ಮಲವಳ್ಳಿ
ಚಾರು ವದನ=ಸುಂದರವಾದ ಮುಖ,
ಕ್ಷೋಣಿ=ಭೂಮಿ,
ವಾಸವಾರ್ಚಿತ=ಇಂದ್ರನಿಂದ ಪೂಜಿಸಲ್ಪಡುವವ,
ದಿವಿಜ=ದೇವತೆಗಳು,
ಬಾಣ ದನುಜ=ಬಾಣನೆಂಬ ಅಸುರ,
ಮತ್ತಷ್ಟು ಹಾಡಿಗಾಗಿ ನನ್ನ channal ಸಬ್ಸ್ಕ್ರೈಬ್ ಮಾಡಿಕೊಳ್ಳಿ..
ನಿಮ್ಮ ಒಂದು like, comment, share, subscribe ಮಾಡುವುದರ ಮೂಲಕ ನನಗೆ ಪ್ರೋತ್ಸಾಹ ನೀಡಿ... ನಿಮ್ಮ ಒಂದು like comment ಸಬ್ಸ್ಕ್ರೈಬ್ ನನಗೆ ಇನ್ನಷ್ಟು ಹಾಡನ್ನು ಹಾಡಲು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ..
ಈ channel ಅಲ್ಲಿ ನಾನು ಎಲ್ಲಾ ತರಹದ ಹಾಡು,ಶ್ಲೋಕ,
ಭಜನೆ,ಹಾಗೂ ಉಪಯುಕ್ತ ಮಾಹಿತಿ ನೀಡುವ ಪ್ರಯತ್ನ
Thank you 🙏for watching ❤️
ಧನ್ಯವಾದಗಳು ❤️🙏