Перейти к содержимому

A Manju Angry On Tehsildar : ತಹಸಿಲ್ದಾರ್ ಮೇಲೆ JDS ಶಾಸಕ ಎ ಮಂಜು ಫುಲ್ ಗರಂ ! | Arkalgud | TV5 Kannada

TV5 Kannada

0:00 / 0:00

A Manju Angry On Tehsildar : ತಹಸಿಲ್ದಾರ್ ಮೇಲೆ JDS ಶಾಸಕ ಎ ಮಂಜು ಫುಲ್ ಗರಂ ! | Arkalgud | TV5 Kannada

1 824 просмотра · 22 часа назад
TV5 Kannada
2,73 млн подписчиков
1 824 просмотра · 22 часа назад
A Manju Angry On Tehsildar : ತಹಸಿಲ್ದಾರ್ ಮೇಲೆ JDS ಶಾಸಕ ಎ ಮಂಜು ಫುಲ್ ಗರಂ ! | Arkalgud | TV5 Kannada ಹಾಸನ ಜಿಲ್ಲೆಯ ಅರಕಲಗೂಡು ತಹಶೀಲ್ದಾರ್ ಕಚೇರಿಯಲ್ಲಿ ಜಮೀನು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಭಾರಿ ಹೈಡ್ರಾಮಾ ನಡೆದಿದೆ. ಬೆಳವಾಡಿ ಗ್ರಾಮದ ಮಹಿಳೆಯರು ತಹಶೀಲ್ದಾರ್ ಸೌಮ್ಯ ಅವರೊಂದಿಗೆ ತೀವ್ರ ಮಾತಿನ ಚಕಮಕಿಗೆ ಇಳಿದು ಕಚೇರಿ ಆವರಣದಲ್ಲೇ ಆಕ್ರೋಶ ಹೊರಹಾಕಿದ್ದಾರೆ. ಕಳೆದ 50 ರಿಂದ 60 ವರ್ಷಗಳಿಂದ ನಾವು ಜಮೀನು ಉಳುಮೆ ಮಾಡಿಕೊಂಡು ಮನೆ ಕಟ್ಟಿ ವಾಸಿಸುತ್ತಿದ್ದರೂ, 2 ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಮತ್ತೊಬ್ಬರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳದಲ್ಲಿದ್ದ ಜೆಡಿಎಸ್ ಶಾಸಕ ಎ. ಮಂಜು ಅವರ ಎದುರಲ್ಲೇ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕೆಂಡಮಂಡಲವಾದಾಗ, ಶಾಸಕರು ಮಧ್ಯಪ್ರವೇಶಿಸಿ ತಹಶೀಲ್ದಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ನಂತರ TV5 ಕನ್ನಡಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಸೌಮ್ಯ, ಕೋರ್ಟ್ ನಿರ್ದೇಶನದಂತೆ ಮಾಳಿಗೆಯ್ಯ ಎಂಬುವರ ಮಕ್ಕಳ ಹೆಸರಿಗೆ ಮೂರು ಸರ್ವೆ ನಂಬರ್‌ಗಳ ಜಾಗವನ್ನು ಕಾನೂನು ಪ್ರಕಾರವೇ ಖಾತೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳವಾಡಿ ಗ್ರಾಮಸ್ಥರ ಬಳಿ ಜಮೀನಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳಿದ್ದರೆ ತಂದುಕೊಡಲಿ, ಕಾನೂನು ಚೌಕಟ್ಟು ಬಿಟ್ಟು ಅಧಿಕಾರಿಗಳು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. A high-voltage drama unfolded at the Arakalagudu Tehsildar office in Hassan district over alleged illegal land khata mutation. Women from Belawadi village engaged in a heated argument with Tehsildar Soumya inside the administrative office premises. The villagers alleged that despite cultivating the land and living in houses constructed there for over 50 to 60 years, 2 acres and 10 guntas of land were illegally mutated to another party's name. Tension escalated as villagers confronted officials directly in front of JDS MLA A. Manju, who intervened and reprimanded the Tehsildar over the administrative negligence. Speaking exclusively to TV5 Kannada following the incident, Tehsildar Soumya stated that the land mutation was executed legally for the children of Maligaiyah as per court directions. The Tehsildar further added that if Belawadi villagers possess valid land ownership documents, they should submit them for legal review, as the administration must operate strictly within legal frameworks. #Arakalagudu #HassanNews #AManju #TehsildarOffice #BelawadiVillage #LandDispute #RevenueDepartment #KarnatakaNews #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬