Kannadada Srimathe | ಕನ್ನಡದ ಶ್ರೀ ಮಾತೆ | Upasana mohan | Bhavageete | kavya palachandra | Nishita
Upasana mohan
0:00 / 0:00
Kannadada Srimathe | ಕನ್ನಡದ ಶ್ರೀ ಮಾತೆ | Upasana mohan | Bhavageete | kavya palachandra | Nishita
2 095 просмотров · 11 дн. назад
Upasana mohan
13,6 тыс. подписчиков
2 095 просмотров · 11 дн. назад
ಕನ್ನಡದ ಶ್ರೀ ಮಾತೆ ರಾಜರಾಜೇಶ್ವರಿ
ನಿನ್ನಭಯ ನಮಗಿರಲು ಅನುದಿನವು ಐಸಿರಿ
ಅಮ್ಮನಾ ಕರುಳಲ್ಲೆ ಕುಡಿಯಾಗಿ ಬಂದೆ
ತೊದಲಿನಾ ನುಡಿಯಲ್ಲಿ ಸವಿಜೇನ ತಂದೆ
ವರ್ಣಮಾಲೆಯ ಜೊತೆಗೆ ಸಂಸ್ಕಾರ ನೀಡಿ
ಅರಿವಿನಾ ಹಾದಿಯಲಿ ಬೆಳಕಾಗಿ ನಿಂದೆ
ಕವಿಕಾವ್ಯ ಬಣ್ಣನೆಗೆ ಭಾವಶೃತಿಯಾದೆ
ಜ್ಞಾನಪೀಠಕೆ ಏರಿ ಮುಕುಟ ಮಣಿಯಾದೆ
ದಾಸಾನುದಾಸರ ಅನುಭಾವ ಕೃತಿಗೆ
ಅಜ್ಞಾನ ನೀಗಿಸುವ ಹಿರಿ ಶಕ್ತಿಯಾದೆ
ಕನ್ನಡದ ಪರಿಮಳವ ಗಂಧದಲಿ ಇಟ್ಟೆ
ಗಿರಿಝರಿಯ ಹರಿವಿನಲಿ ಅಮೃತವ ಬಿಟ್ಟೆ
ವಿಶ್ವವಿಖ್ಯಾತಿಯನು ಕಲೆಗಳಿಗೆ ಕೊಟ್ಟು
ಚಿನ್ನದಾ ಗಣಿಯನ್ನೆ ವರವಾಗಿ ಇಟ್ಟೆ
ರಚನೆ: ಉಪಾಸನಾ ಮೋಹನ್
ಗಾಯನ: ಕಾವ್ಯ ಪಾಲಚಂದ್ರ
ನಿಶಿತಾ ಪ್ರಸಾದ್
ಉಪಾಸನಾ ಮೊಹನ್