‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ ನಡುವೆ ಕಣ್ಣೀರಿಡುತ್ತಿರುವ ಸ್ಲಂ ನಿವಾಸಿಗಳು | Kalburgi
eedina
0:00 / 0:00
‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ ನಡುವೆ ಕಣ್ಣೀರಿಡುತ್ತಿರುವ ಸ್ಲಂ ನಿವಾಸಿಗಳು | Kalburgi
356 просмотров · 19 часов назад
eedina
458 тыс. подписчиков
356 просмотров · 19 часов назад
ಒಂದು ಕಡೆ ನ್ಯಾಯಾಲಯದ ಮೆಟ್ಟಿಲೇರಿರುವ ವಾಸಸ್ಥಳದ ಹಕ್ಕಿನ ಹೋರಾಟ; ಮತ್ತೊಂದೆಡೆ ಬದುಕಿನ ಮೂಲಭೂತ ಅವಶ್ಯಕತೆಗಳಾದ ರಸ್ತೆ, ಕುಡಿಯುವ ನೀರು ಮತ್ತು ದಿನಸಿ ಪಡೆಯುವ ದಾರಿಯೇ ಬಂದ್ ಆಗಿದ್ದು, ಕಲಬುರಗಿಯ ಹುಮನಾಬಾದ್ ರಿಂಗ್ ರಸ್ತೆಯ ಕೆ ಕೆ ನಗರ ಸಮೀಪದ ಸಿದ್ದೇಶ್ವರ ಕಾಲನಿ ಮತ್ತು ರಾಮನಗರ ಸ್ಲಂ ವಿಭಾಗ–2ರ ಸರ್ವೇ ನಂ.137ರಲ್ಲಿ ವಾಸಿಸುತ್ತಿರುವ 92ಕ್ಕೂ ಅಧಿಕ ಸ್ಲಂ ನಿವಾಸಿಗಳ ಬದುಕು ಇದೀಗ ಆತಂಕದ ನಡುವೆ ಸಿಲುಕಿದೆ.
“ಗುಡಿಸಲು ತೆರವುಗೊಳಿಸದಂತೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದರೂ, ಜಮೀನಿನ ಸುತ್ತ ಜೆಸಿಬಿ ಮೂಲಕ ತಗ್ಗು ತೋಡಿ ತಂತಿ ಬೇಲಿ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ತಮ್ಮ ಓಡಾಟದ ದಾರಿ ಹಾಗೂ ನೀರು ತರಲು ಬಳಸುತ್ತಿದ್ದ ಮಾರ್ಗ ಬಂದ್ ಆಗಿದೆ” ಎಂಬುದು ನಿವಾಸಿಗಳ ಆರೋಪವಾಗಿದೆ.
#Kalaburagi #SiddeshwarColony #RamanagarSlum #SlumResidents #HousingRights #RightToHousing #HighCourtStay #HumanRights #BasicRights #DrinkingWater #RoadAccess #SlumIssues #UrbanPoor #LandDispute #SurveyNo137 #HumnabadRingRoad #KalaburagiNews #KarnatakaNews #KannadaNews #SocialJustice #HousingCrisis #CivicIssues #PublicRights #ResidentsProtest #JCBWork #FenceIssue #WaterAccess #RightToLive #BreakingNews #Eedina