Перейти к содержимому

ಚನ್ನದಾಸರು | CHANNADASAR | | LANGUAGE | KANNADA | DEVALAPURA | KAMPLI | BALLARI | KARNATAKA

eedina

0:00 / 0:00

ಚನ್ನದಾಸರು | CHANNADASAR | | LANGUAGE | KANNADA | DEVALAPURA | KAMPLI | BALLARI | KARNATAKA

3 418 просмотров · 1 год назад
eedina
457 тыс. подписчиков
3 418 просмотров · 1 год назад
ಕರ್ನಾಟಕದವರೇ ಆಗಿದ್ದ ಈ ಸಮುದಾಯದವರು, ಆಂಧ್ರದೆಡೆಗೆ ವಲಸೆ ಹೋಗಿ, ಮತ್ತೆ ಕರ್ನಾಟಕಕ್ಕೆ ಬಂದ ಪರಿಣಾಮ, ತೆಲುಗು ಮನೆಮಾತಾಯಿತು. ಒಂದು ಕಾಲದಲ್ಲಿ ಬೇಟೆಯಿಂದಲೇ ಬದುಕು ಸಾಗುತ್ತಿತ್ತು. ನಂತರದಲ್ಲಿ ಏಕತಾರಿ, ತಂಬೂರಿಯಂತಹ ವಿಶಿಷ್ಟ ವಾದ್ಯಗಳನ್ನು ಬಳಸಿ ಹಾಡುಗಳನ್ನು ಹಾಡುತ್ತ ಭಿಕ್ಷಾಟನೆ ಮಾಡುವ ರೂಢಿ ಚಾಲ್ತಿಗೆ ಬಂದಿತು. ಊರೂರು ಸುತ್ತುತ್ತ ಕೂದಲು, ಹೇರ್ ಪಿನ್ ಮಾರುವುದು, ಗುಜರಿ ವಸ್ತುಗಳನ್ನು ಸಂಗ್ರಹಿಸಿ ಮಾರುವುದು, ಕೂಲಿ, ಅಪರೂಪಕ್ಕೆ ಕೃಷಿಯತ್ತಲೂ ಸಮುದಾಯ ನಡೆದಿದೆ. ಮೂಲಭಾಷೆ ತೆಲುಗು. ಬಳಸುವುದು ಕನ್ನಡ ಲಿಪಿಯನ್ನು. ತಮ್ಮ ಸಮುದಾಯದವರೇ ಇದ್ದಾಗ ಮರುಗು ಭಾಷೆ ಬಳಕೆ ಹೇರಳವಾಗಿ ಉಂಟು. ಮರುಗು ಭಾಷೆಯನ್ನು ಬರೆದಿಡುವ ಪ್ರಯತ್ನ ನಡೆದಿದೆಯಾದರೂ ಸಂಪೂರ್ಣವಾಗಿಲ್ಲ. ಸರಿಸುಮಾರು 90 ಸಾವಿರದಷ್ಟು ಮಂದಿ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ, ದಕ್ಷಿಣ ಕನ್ನಡ, ಕೋಲಾರದಲ್ಲಿ ಹೆಚ್ಚು ಮಂದಿ ಚನ್ನದಾಸರು ಕಾಣಿಸುವುದುಂಟು. * * * * ಅಳಿವಿನಂಚಿನಲ್ಲಿರುವ ಕನ್ನಡೇತರ ಭಾಷೆಗಳನ್ನು ನಮ್ಮದೇ ಮಿತಿಯಲ್ಲಿ ಪರಿಚಯಿಸುವುದು ಈ ‘ಬಹು ಕರ್ನಾಟಕ’ ಸರಣಿಯ ಉದ್ದೇಶ. ಈ ವಿಡಿಯೋಗಳಲ್ಲಿ, ಆಯಾ ಭಾಷೆಯ ಇಬ್ಬರು ಕುಂತು, ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆ. ಇವುಗಳಲ್ಲಿ ಬಹುತೇಕ ಭಾಷೆಗಳು ನಮಗೆ ಅರ್ಥವಾಗದೆ ಹೋಗಬಹುದು. ಆದರೆ, ಕನ್ನಡ ನಾಡಿನಲ್ಲೇ ಬದುಕುತ್ತಿರುವ ಈ ಜನರ ಭಾಷೆಗಳು ಹೇಗಿರಬಹುದು ಮತ್ತು ಕನ್ನಡದ ಯಾವೆಲ್ಲ ಪದಗಳು ಈ ಭಾಷೆಗಳಲ್ಲಿ ಬಳಕೆಯಲ್ಲಿರಬಹುದು ಅಂತ ತಿಳಿದುಕೊಳ್ಳೋ ಕುತೂಹಲಕ್ಕಾದರೂ ನೀವು ಈ ವಿಡಿಯೊಗಳನ್ನು ನೋಡಿದರೆ ನಮಗೆ ರಾಶಿ ಖುಷಿ. ಕನ್ನಡದೊಟ್ಟಿಗೆ ಸಾವಿರಕ್ಕೂ ಹೆಚ್ಚು ಪುಟ್ಟ-ಪುಟ್ಟ ಭಾಷೆಗಳು ಲಿಪಿಯ ನಂಟು ಹೊಂದಿವೆ ಅನ್ನೋದೇ ಆಶ್ಚರ್ಯದ ಮತ್ತು ಸಡಗರದ ವಿಷಯ. ಆದರೆ, ನಾವೆಲ್ಲರೂ, ಕನ್ನಡ ಭಾಷೆಗಿರುವ ಆತಂಕಗಳ ಬಗ್ಗೆ ಮಾತನಾಡ್ತಿದ್ದೇವೆಯೇ ವಿನಾ ಕನ್ನಡ ಲಿಪಿಯನ್ನೇ ನೆಚ್ಚಿಕೊಂಡಿರುವ ಈ ಭಾಷೆಗಳಿಗಿರುವ ಆತಂಕಗಳ ಬಗ್ಗೆ ಗಮನ ಕೊಟ್ಟೇ ಇಲ್ಲ. ಈ ಭಾಷೆಗಳ ಕುರಿತು ಅಲ್ಲಲ್ಲಿ-ಆಗಾಗ ಅಧ್ಯಯನಗಳು ನಡೆದಿವೆ ನಿಜ; ಆದ್ರೆ, ಬರೀ ಅಧ್ಯಯನಗಳನ್ನು ತಗೊಂಡು ಎಂತ ಮಾಡೋದು? ಹಾಗಾಗಿ, 2024ರ ನವೆಂಬರ್ ನೆಪದಲ್ಲಾದ್ರೂ ಇತ್ತ ಗಮನ ಹರಿಸೋಣ ಅನ್ನೋದು ಈದಿನ.ಕಾಮ್ ಆಶಯ. ವಿಡಿಯೊಗಳನ್ನು ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಹಾಗೆಯೇ, ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದ್ರೆ ದಯವಿಟ್ಟು ವಿಡಿಯೊಗಳನ್ನು ಶೇರ್ ಮಾಡಿ. * * * * ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media) https://pages.razorpay.com/pl_OoJj7ZD... Join this channel to get access to perks:    / @eedinanews   Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #ಚನ್ನದಾಸರು #ಅಲೆಮಾರಿ #ಸಮುದಾಯ #ಬುಡಕಟ್ಟು #ಜನಸಾಮಾನ್ಯರು #ಬದುಕು #ಜನಜೀವನ #ತೆಲುಗು #ಮರುಗು #ಭಾಷೆ #ದ್ರಾವಿಡಭಾಷೆ #ಕನ್ನಡ #ಲಿಪಿ #ಬೇಡ #ದೇವಲಾಪುರ #ಕಂಪ್ಲಿ #ಬಳ್ಳಾರಿ #ವಿಜಯನಗರ #ಕಲ್ಯಾಣಕರ್ನಾಟಕ #ಗದಗ #ಕೊಪ್ಪಳ #ಬಳ್ಳಾರಿ #ಬೀದರ್ #ರಾಯಚೂರು #ವಲಸೆ #ಕರ್ನಾಟಕ #ದಕ್ಷಿಣಭಾರತ #Channadasar #Nomad #Tribe #People #Life #Lifestyle #Language #DravidianLanguage #Community #Hospet #Vijayanagara #Vijayanagar #Bidar #Kalaburagi #Devalapura #Kampli #Ballari #Ballary #Koppal #Gadag #Telugu #Marugu #Mangalore #Karnataka #SouthIndia #eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್‌ #ಈದಿನಲೈವ್‌ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್‌ಗಾಂಧಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್‌ಪ್ಲೈನರ್‌ #ಈದಿನಸುದ್ದಿವಿಶ್ಲೇಷಣೆ