Nugge Soppu Karibevu Pudi
uma Amar Belagur
0:00 / 0:00
Nugge Soppu Karibevu Pudi
41 просмотр · 3 нед. назад
uma Amar Belagur
354 подписчика
41 просмотр · 3 нед. назад
ನುಗ್ಗೆ ಸೊಪ್ಪು – ಕರಿಬೇವಿನ ಚಟ್ನಿಪುಡಿ
Uma Amar Belagur’s Kitchen
ಬೇಕಾಗುವ ಸಾಮಗ್ರಿಗಳು
1. ಕರಿಬೇವು ಒಣಗಿಸಿದ್ದು – 1 ಬೌಲ್ (40 ಗ್ರಾಂ)
2. ನುಗ್ಗೆ ಸೊಪ್ಪು ಒಣಗಿಸಿದ್ದು – 2 ಬೌಲ್ (40 ಗ್ರಾಂ)
3. ಕಡ್ಲೆಬೇಳೆ – 1 ಹಿಡಿ (40 ಗ್ರಾಂ)
4. ಉದ್ದಿನಬೇಳೆ – 1 ಹಿಡಿ (30 ಗ್ರಾಂ)
5. ಒಣ ಮೆಣಸಿನಕಾಯಿ – 50 ಗ್ರಾಂ
6. ಉಪ್ಪು – 3 ಸ್ಪೂನ್ (30 ಗ್ರಾಂ), ರುಚಿಗೆ ತಕ್ಕಷ್ಟು
7. ಹುಣಸೆಹಣ್ಣು – 30–40 ಗ್ರಾಂ
8. ಜೀರಿಗೆ – 1 ಸ್ಪೂನ್ (6 ಗ್ರಾಂ)
9. ಮೆಂತೆ – 1 ಸ್ಪೂನ್ (6 ಗ್ರಾಂ)
10. ಒಣಕೊಬ್ಬರಿ – 2 ಹಿಡಿ (50 ಗ್ರಾಂ)
11. ಅಗಸೆ ಬೀಜ – 2 ಸ್ಪೂನ್ (10 ಗ್ರಾಂ)
12. ಎಳ್ಳು – 2 ಸ್ಪೂನ್ (10 ಗ್ರಾಂ)
13. ಬೆಲ್ಲ – 6 ಸ್ಪೂನ್ (40 ಗ್ರಾಂ), ರುಚಿಗೆ ತಕ್ಕಷ್ಟು
14. ಕಡಲೆಬೀಜ – 1 ಹಿಡಿ (50 ಗ್ರಾಂ)
15. ಪುಟಾಣಿ (ಹುರಿಗಡಲೆ) – 1 ಹಿಡಿ (40 ಗ್ರಾಂ)
ತಯಾರಿ
ನುಗ್ಗೆ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಕಟ್ಟಿನ ಸಮೇತ ಚೆನ್ನಾಗಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಆರಿಸಿಕೊಳ್ಳಿ.
ಮಾಡುವ ವಿಧಾನ
1. ಒಂದು ಬಾಣಲೆಯಲ್ಲಿ ಅರ್ಧ ಚಮಚ ಎಣ್ಣೆ ಹಾಕಿ, ಒಣಗಿಸಿದ ನುಗ್ಗೆ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಚೆನ್ನಾಗಿ ಗರಿಗರಿಯಾಗುವಂತೆ ಹುರಿಯಿರಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ ತೆಗೆದಿಟ್ಟುಕೊಳ್ಳಿ.
2. ಹುಣಸೆಹಣ್ಣನ್ನು ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ. ನಂತರ ಉಪ್ಪಿನ ಜೊತೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
3. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಕಡ್ಲೆಬೇಳೆ, ಉದ್ದಿನಬೇಳೆ, ಮೆಂತೆ, ಜೀರಿಗೆ, ಒಣ ಮೆಣಸಿನಕಾಯಿ, ಅಗಸೆ ಬೀಜ ಮತ್ತು ಎಳ್ಳನ್ನು ಇದೇ ಕ್ರಮದಲ್ಲಿ ಕಡಿಮೆ ಉರಿಯಲ್ಲಿ ಹುರಿದು ತಣ್ಣಗಾಗಲು ಬಿಡಿ.
4. ಅದೇ ಬಾಣಲೆಗೆ ಕಾಲು ಚಮಚ ಎಣ್ಣೆ ಹಾಕಿ ಕಡಲೆಬೀಜವನ್ನು ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹುರಿಗಡಲೆ ಸೇರಿಸಿ ಬಿಸಿ ಮಾಡಿ. ಒಲೆಯನ್ನು ಆರಿಸಿ, ಒಣಕೊಬ್ಬರಿ ಸೇರಿಸಿ ಚೆನ್ನಾಗಿ ಕೈಯಾಡಿಸಿ ತಣ್ಣಗಾಗಲು ಬಿಡಿ.
ಮಿಕ್ಸಿ ಮಾಡುವ ವಿಧಾನ
1. ಮೊದಲು ಹುಣಸೆಹಣ್ಣು ಮತ್ತು ಉಪ್ಪಿನ ಮಿಶ್ರಣವನ್ನು ಮಿಕ್ಸಿ ಮಾಡಿ.
2. ನಂತರ ಹುರಿದ ಕಡ್ಲೆಬೇಳೆ ಮತ್ತು ಇತರ ಸಾಮಗ್ರಿಗಳ ಮಿಶ್ರಣವನ್ನು ಸೇರಿಸಿ ಪುಡಿ ಮಾಡಿ.
3. ಅದಕ್ಕೆ ಕಡಲೆಬೀಜ, ಹುರಿಗಡಲೆ ಮತ್ತು ಒಣಕೊಬ್ಬರಿಯ ಮಿಶ್ರಣವನ್ನು ಸೇರಿಸಿ ಮಿಕ್ಸಿ ಮಾಡಿ.
4. ಈಗ ಒಣಗಿಸಿದ ಸೊಪ್ಪಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ.
5. ಬೆಲ್ಲವನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿ ಮಾಡಿ.
6. ಈ ಪುಡಿಯನ್ನು ಒಂದು ದೊಡ್ಡ ಪಾತ್ರೆಗೆ ಸುರಿದು ಕೈಯಿಂದ ಚೆನ್ನಾಗಿ ಕಲಸಿ. ರುಚಿ ನೋಡಿ, ಅಗತ್ಯವಿದ್ದರೆ ಉಪ್ಪು ಅಥವಾ ಬೆಲ್ಲವನ್ನು ಸೇರಿಸಿಕೊಳ್ಳಿ.
ಒಗ್ಗರಣೆ ಹಾಕುವ ವಿಧಾನ
ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಒಣ ಮೆಣಸಿನಕಾಯಿ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಹಾಕಿ. ಅದಕ್ಕೆ ತಯಾರಿಸಿದ ಚಟ್ನಿಪುಡಿಯನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ನಂತರ ತಣ್ಣಗಾಗಲು ಬಿಡಿ ಮತ್ತು ಒಣ, ಸ್ವಚ್ಛವಾದ ಬಾಟಲಿಯಲ್ಲಿ ತುಂಬಿಡಿ.
ಚಟ್ನಿಪುಡಿಯನ್ನು ಹೇಗೆ ಬಳಸಬಹುದು?
ಈ ಪುಡಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಚಿತ್ರಾನ್ನ ಮಾಡಬಹುದು.
ಬಿಸಿ ಅನ್ನಕ್ಕೆ ತುಪ್ಪ ಮತ್ತು ಚಟ್ನಿಪುಡಿ ಸೇರಿಸಿ ಕಲಸಿ ತಿನ್ನಬಹುದು.
ಚಟ್ನಿಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ನೇರವಾಗಿಯೂ ಸವಿಯಬಹುದು.
ಪೌಷ್ಟಿಕಾಂಶ: ನುಗ್ಗೆ ಸೊಪ್ಪು, ಕರಿಬೇವು, ಬೇಳೆ, ಬೀಜಗಳು ಮತ್ತು ಎಳ್ಳು ಸೇರಿದಂತೆ ವಿವಿಧ ಪದಾರ್ಥಗಳಿಂದ ಈ ಚಟ್ನಿಪುಡಿಗೆ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ಗಳು ಮತ್ತು ಇತರ ಪೌಷ್ಟಿಕಾಂಶಗಳು ದೊರೆಯುತ್ತವೆ.
YouTube: Uma Amar Belagur’s Kitchen