Mysore ಅರಮನೆಯ ಕೋಟೆ ಗೋಡೆ ಕುಸಿತ | Vijaya Karnataka
Vijay Karnataka | ವಿಜಯ ಕರ್ನಾಟಕ
0:00 / 0:00
Mysore ಅರಮನೆಯ ಕೋಟೆ ಗೋಡೆ ಕುಸಿತ | Vijaya Karnataka
2 528 просмотров · 3 г. назад
Vijay Karnataka | ವಿಜಯ ಕರ್ನಾಟಕ
1,81 млн подписчиков
2 528 просмотров · 3 г. назад
ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ಜಗತ್ಪ್ರಸಿದ್ಧ ಮೈಸೂರು ಅರಮನೆಯ ಕೋಟೆ ಗೋಡೆ ಕುಸಿದಿದೆ. ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ನಡುವೆ ಕೋಟೆಯ ಗೋಡೆ ಕುಸಿತವಾಗಿದೆ. ಮೈಸೂರು ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಕೋಟೆಯ ಗೋಡೆ ಕುಸಿದಿದೆ. ಅದೃಷ್ಟಾವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಮಳೆಯಿಂದ ಶಿಥಿಲಗೊಂಡಿದ್ದ ಕೋಟೆ ದುರಸ್ತಿಗೆ ಅರಮನೆ ಮಂಡಳಿ, ಜಿಲ್ಲಾಡಳಿತ ಮುಂದಾಗದೇ ಇರುವುದು ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಮೈಸೂರಿನಲ್ಲಿ ಕೆಲ ತಿಂಗಳಿಂದ ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ಅರಮನೆ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕೋಟೆ ಮಾರಮ್ಮ ದೇಗುಲ-ಜಯಮಾರ್ತಾಂಡ ದ್ವಾರದ ನಡುವಿನ ಕೋಟೆ ಕಟ್ಟುವಾಗ ಅಳವಡಿಸಿರುವ ಸೈಜುಗಲ್ಲು ಕುಸಿದು ಬೀಳುವ ಆತಂಕ ಎದುರಾಗಿತ್ತು. ಶತ್ರುಗಳಿಂದ ರಕ್ಷಣೆ ಪಡೆಯಲು ಅರಮನೆ ಸುತ್ತಲೂ ಸುಣ್ಣದ ಗಾರೆ ಮತ್ತು ಸೈಜುಗಲ್ಲುಗಳನ್ನು ಬಳಸಿ ಕೋಟೆ ಕಟ್ಟಲಾಗಿದೆ. ಅರಸೊತ್ತಿಗೆ ಅಂತ್ಯವಾದ ಬಳಿಕ ಅರಮನೆ ಆಡಳಿತ ಮಂಡಳಿ ಕೋಟೆಯನ್ನು ನಿರ್ವಹಣೆ ಮಾಡುತ್ತಿದೆ. ನಿರಂತರ ಮಳೆಗೆ ಅರಮನೆಯ ಕೋಟೆ ಕುಸಿಯುವ ಹಂತ ತಲುಪಿತ್ತು.
#mysore #mysorepalace #wallcollapse
Our Website : https://Vijaykarnataka.com
Facebook: / vijaykarnataka
Twitter: / vijaykarnataka