ಸಬ್ಬಸಿಗೆ ಸೊಪ್ಪಿನ ಚಿತ್ರಾನ್ನ (dill leaves lemon rice) akkana aduge mane.
Akkana Aduge Mane
0:00 / 0:00
ಸಬ್ಬಸಿಗೆ ಸೊಪ್ಪಿನ ಚಿತ್ರಾನ್ನ (dill leaves lemon rice) akkana aduge mane.
494 просмотра · 10 дней назад
Akkana Aduge Mane
100 подписчиков
494 просмотра · 10 дней назад
ಬೇಕಾಗುವ ಪದಾರ್ಥಗಳು :- ಅನ್ನ ಈರುಳ್ಳಿ, ಹಸಿಮೆಣಸಿನಕಾಯಿ, ನಿಂಬೆಹಣ್ಣು, ಉಪ್ಪು ,ಅರಿಶಿಣ ಪುಡಿ, ಕಡ್ಲೆಬೇಳೆ, ಉದ್ದಿನಬೇಳೆ , ಕಡ್ಲೆಬೀಜ ಸಾಸಿವೆ ,ಜೀರಿಗೆ ಸಬಸ್ಕೆ ಸೊಪ್ಪು , ಕರಿಬೇವು ಸೊಪ್ಪು ,ಎಣ್ಣೆ.
ಮಾಡುವ ವಿಧಾನ :- ಒಂದು ಬಾಣಲೆಯನ್ನು ತೆಗೆದುಕೊಂಡು ಅದನ್ನು ಬಿಸಿಯಾಗಲು ಇಡಬೇಕು .ಅದು ಬಿಸಿಯಾದ ನಂತರ ಅದಕ್ಕೆ ಎಣ್ಣೆಯನ್ನು ಹಾಕಿ ,ಮೊದಲು ಕಡಲೆ ಬೀಜ ,ಎರಡು ನಿಮಿಷಗಳ ಕಾಲ ಹುರಿದುಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಉರಿದುಕೊಳ್ಳಬೇಕು ನಂತರ ಅದಕ್ಕೆ ಹಸಿ ಮೆಣಸಿನ ಕಾಯಿ ಕಾಯಿ ,ಕರಿಬೇವು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಅದು ಬೆಂದ ನಂತರ ಅದಕ್ಕೆ ಅರಿಶಿನಪುಡಿ ಉಪ್ಪನ್ನು ಹಾಕಬೇಕು .ಅದು ಚೆನ್ನಾಗಿ ಬೆಂದ ನಂತರ ಅದಕ್ಕೆ ಹೆಚ್ಚಿದ ಸಬಸ್ಕೆ ಸೊಪ್ಪು ಮತ್ತು ನಿಂಬೆಹಣ್ಣನ್ನು ಹಾಕಿ ಎರಡು ಸಲ ತಿರುಗಿಸಿ ಇಳಿಸಬೇಕು ನಂತರ ಮಾಡಿದ ಅನ್ನವನ್ನು ಅದಕ್ಕೆ ಹಾಕಿ ಕಲಿಸಬೇಕು. ಈಗ ಸಬ್ಬಸ್ಸಿಗೆ ಚಿತ್ರನ್ನ ತಿನ್ನಲು ರೆಡಿಯಾಗಿರುತ್ತದೆ.