Перейти к содержимому

ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕದೆ ಮಾಡುವ ಚಿಕನ್ ಪೆಪ್ಪರ್ ಫ್ರೈ (chicken pepper fry) akkana aduge mane.

Akkana Aduge Mane

0:00 / 0:00

ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕದೆ ಮಾಡುವ ಚಿಕನ್ ಪೆಪ್ಪರ್ ಫ್ರೈ (chicken pepper fry) akkana aduge mane.

295 просмотров · 2 недели назад
Akkana Aduge Mane
98 подписчиков
295 просмотров · 2 недели назад
ಬೇಕಾಗುವ ಪದಾರ್ಥಗಳು :- ಚಿಕನ್, ಈರುಳ್ಳಿ, ಕಾಳುಮೆಣಸು ಪುಡಿ ,ಅರಿಶಿಣ ಪುಡಿ ,ಉಪ್ಪು ,.ಎಣ್ಣೆ . ಮಾಡುವ ವಿಧಾನ :- ಎರಡು ಈರುಳ್ಳಿಯನ್ನು ಸ್ಲೈಸ್ ಆಗಿ ಹೆಚ್ಚಿಕೊಳ್ಳಬೇಕು . ಒಂದು ಕಡಾಯಿಯನ್ನು ಬಿಸಿಗೆ ಇಟ್ಟುಕೊಂಡು, ಅದು ಕಾದ ನಂತರ ,ಅದಕ್ಕೆ ಎಣ್ಣೆಯನ್ನು ಹಾಕಬೇಕು .ನಂತರ ಅದಕ್ಕೆ ಈರುಳ್ಳಿಯನ್ನು ಹಾಕಿ ,ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು .ಅರ್ಧ ಬೆಂದ ಮೇಲೆ ಅದಕ್ಕೆ ತೊಳೆದಿಟ್ಟ, ಚಿಕನನ್ನು ಹಾಕಿ ಚೆನ್ನಾಗಿ ತಿರುಗಿಸಿ ಕೊಳ್ಳಬೇಕು. ನಂತರ ಅದಕ್ಕೆ ಅರಿಶಿನಪುಡಿ ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ತಿರುಗಿಸಿ ಕೊಳ್ಳಬೇಕು. ಒಂದು ಐದು ನಿಮಿಷದ ನಂತರ ಅದಕ್ಕೆ ಉಪ್ಪು, ಮತ್ತು ಕಾಳುಮೆಣಸಿನ ಪುಡಿ,ಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳುತ್ತಾ ಇರಬೇಕು. ಹೆಚ್ಚಾಗಿ ಎಣ್ಣೆಯಲ್ಲಿ ತಿರುಗಿಸುತ್ತಾ ಇರಬೇಕು. ನಂತರ ಅದಕ್ಕೆ ನೀರನ್ನು ಹಾಕಿ ಬೇಯಿಸಿಕೊಳ್ಳಬೇಕು .ಚಿಕನ್ ಬೆಂದ ನಂತರ ನೀರು ಬತ್ತಿದ ಮೇಲೆ ಇಳಿಸುವ ಮುನ್ನ ಅದಕ್ಕೆ ಮತ್ತು ಪೆಪ್ಪರಪೌಡರ್, ಅನ್ನು ಹಾಕಿ ಚೆನ್ನಾಗಿ ತಿರುಗಿಸಿ, ಆ ಪೇಪರ್ ಪೌಡರ್ ಮಾಂಸಕ್ಕೆ ಅಂಟಿಕೊಂಡು, ಒಂದು ಒಳ್ಳೆ ಬೈಂಡಿಂಗ್ ಕೊಡುತ್ತದೆ. ಅಲ್ಲಿಯತನಕ ಅದನ್ನ ಚೆನ್ನಾಗಿ ತಿರುಗಿಸಿಕೊಳ್ಳಬೇಕು .ಅದ ಲ್ಲಿಡ್ ಮುಚ್ಚಿರಬೇಕು .ಐದು ನಿಮಿಷಗಳ ನಂತರ ಸ್ಟವ್ ಅನ್ನು ಆಫ್ ಮಾಡಬೇಕು. ಈಗ ಚಿಕನ್ ಪೆಪ್ಪರ್ ಫ್ರೈ ರೆಡಿಯಾಗಿರುತ್ತದೆ.