ತಾವರೆ ಗೆಣಸಿನ ಪಲ್ಯ (Lotus stem gravy) akkana aduge mane.
Akkana Aduge Mane
0:00 / 0:00
ತಾವರೆ ಗೆಣಸಿನ ಪಲ್ಯ (Lotus stem gravy) akkana aduge mane.
92 просмотра · 3 месяца назад
Akkana Aduge Mane
100 подписчиков
92 просмотра · 3 месяца назад
ಬೇಕಾಗುವ ಪದಾರ್ಥಗಳು :- ತಾವರೆಗೆಣಸು ,ಈರುಳ್ಳಿ, ಟೊಮೊಟೊ, ಕೊತ್ತಂಬರಿ, ಕರಿಬೇವು, ಬೆಳ್ಳುಳ್ಳಿ ಶುಂಠಿ ಪೇಸ್ಟ್ ,ಕಾರದಪುಡಿ ,ಧನಿಯ ಪುಡಿ, ಅರಿಶಿಣ ಪುಡಿ ,ಜೀರಿಗೆ ಪುಡಿ, ಚಿಕನ್ ಮಸಾಲ ಪುಡಿ, ಎಣ್ಣೆ ,ಉಪ್ಪು, ಹೆಸರುಬೇಳೆ .
ಮಾಡುವ ವಿಧಾನ :- ತಾವರೆಗೆಣಸನ್ನು ಮೇಲ್ಗಡೆ ಸಿಪ್ಪೆಯನ್ನು ತೆಗೆದು ಅದನ್ನು ತೆಳ್ಳಗೆ ಹೆಚ್ಚಿ 5 ರಿಂದ 6 ಸಲ ನೀರಿನಿಂದ ತೊಳೆಯಬೇಕು .ನಂತರ ಒಂದು ಕುಕ್ಕರನ್ನ ಬಿಸಿಗೆ ಇಟ್ಟುಕೊಂಡು ಅದು ಕಾದ ನಂತರ ಎಣ್ಣೆಯನ್ನು ಹಾಕಿ ಹೆಚ್ಚಿಟ್ಟ ಈರುಳ್ಳಿ, ಕರಿಬೇವನ್ನು ಹಾಕಿ ಫ್ರೈ ಮಾಡಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಅನ್ನ ಸೇರಿಸಿ ಫ್ರೈ ಮಾಡಬೇಕು .ಅದರ ಹಸಿ ವಾಸನೆ ಹೋದ ನಂತರ ಅದಕ್ಕೆ ಕಾರದಪುಡಿ ದನಿಯ ಪುಡಿ ಅರಿಶಿಣ ಪುಡಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ನಂತರ ಅದಕ್ಕೆ ಹೆಚ್ಚಿದ ಟೊಮೇಟೊವನ್ನು ಹಾಕಿಕೊಳ್ಳಬೇಕು. ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು .ನಂತರ ಇದಕ್ಕೆ ಜೀರಿಗೆ ಪುಡಿಯನ್ನು ಹಾಕಬೇಕು .ನಂತರ ಇದಕ್ಕೆ ಚಿಕನ್ ಮಸಾಲೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ,ಇದನ್ನು ತೊಳೆದಿಟ್ಟ ಗೆಣಸನ್ನ ಹಾಕಬೇಕು .ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಹೆಸರುಬೇಳೆಯನ್ನು ತೊಳೆದು ಸೇರಿಸಬೇಕು .ಉಪ್ಪನ್ನು ಹಾಕಿ ಚೆನ್ನಾಗಿ, ಐದರಿಂದ ಆರು ಪ್ರಶರ್ ಕುಕ್ಕರ್ ನಲ್ಲಿ ತೆಗೆಸಬೇಕು .ಇದು ಚಪಾತಿ ದೋಸೆ ರೊಟ್ಟಿ ಪರೋಟ ಅನ್ನಕ್ಕೆ ಒಳ್ಳೆ ಕಾಂಬಿನೇಷನ್ ಆಗಿರುತ್ತದೆ.