Перейти к содержимому

ಎಲ್ಲರೂ ಸುಲಭವಾಗಿ ಹಾಡಬಹುದು |Yenu danava madali hariye

HARIYA CHARANA ಹರಿಯ ಚರಣ

0:00 / 0:00

ಎಲ್ಲರೂ ಸುಲಭವಾಗಿ ಹಾಡಬಹುದು |Yenu danava madali hariye

11 859 просмотров · 4 месяца назад
HARIYA CHARANA ಹರಿಯ ಚರಣ
9,57 тыс. подписчиков
11 859 просмотров · 4 месяца назад
#Adhikamasa #dasarapadagalu #devotionalsongs #bhakthi #music #prabhavatibhajanapadagalu # ಹಾಡು ಇಷ್ಟವಾದ್ರೆ ಒಂದು ಲೈಕ್ ಹಾಕಿ ಪ್ರೊತ್ಸಾಹಿಸಿ. ಸಬ್ಸ್ಕ್ರೈಬ್ ಆಗದೇ ಇರುವವರು ಸಬ್ಸ್ಕ್ರೈಬ್ ಆಗಿ.ನಾನು ಹಾಕುವ ಎಲ್ಲಾ ವಿಡಿಯೋ ಗಳು ನಿಮಗೆ ಆಗ ಸುಲಭವಾಗಿ ತಲಪುತ್ತೆ 😊ಹರೇ ಶ್ರೀನಿವಾಸ 🙏 ಸಾಹಿತ್ಯ : ಏನು ದಾನವ ಮಾಡಲಿ ಹರಿಯೇ ಯಾವ ದಾನವ ಮಾಡಲಿ ಹರಿ ಧ್ಯಾನಕ್ಕೆ ಸಮನಾದ ದಾನಂಗಳುಂಟೆ ||ಪ|| ಶತಕೋಟಿ ಕನ್ಯಾ ಪ್ರದಾನವ ಮಾಡಲಿ ಅತಿಶಯದ ಉದಕ ದಾನವ ಮಾಡಲಿ ಮತಿಶುದ್ಧನಾಗಿ ಭೂದಾನವ ಮಾಡಲಿ ಕೃತಿರಮಣ ನಿನ್ನ ಧ್ಯಾನಕ್ಕೆ ಸರಿಯುಂಟೆ || ದಿನಕ್ಕೊಂದು ಸಾವಿರ ಗೋದಾನ ಮಾಡಲಿ ಅನುದಿನ ಅನ್ನದಾನವ ಮಾಡಲಿ ಘನವಾಗಿ ಸುವರ್ಣ ದಾನವ ಮಾಡಲಿ ವನಜನಾಭನೆ ನಿನ್ನ ಧ್ಯಾನಕ್ಕೆ ಸರಿಯುಂಟೆ || ಉತ್ತಮವಾದ ವಸ್ತ್ರ ದಾನವ ಮಾಡಲಿ ಮುತ್ತು ಮಾಣಿಕ್ಯ ದಾನವ ಮಾಡಲಿ ಅತ್ಯಂತ ವಿದ್ಯಾ ಪ್ರದಾನವ ಮಾಡಲಿ ಚಿತ್ತಜ ಪಿತನ ಧ್ಯಾನಕ್ಕೆ ಸರಿಯುಂಟೆ ||| ನಾನಾ ತೀರ್ಥಗಳಲ್ಲಿ ಸ್ನಾನವ ಮಾಡಲಿ ಕಾನನದೊಳಗೆ ತಪವನು ಮಾಡಲಿ ಜ್ಞಾನದಿಂದ ಶಾಸ್ತ್ರಾರ್ಥ ಮಾಡಲಿ ನಿನ್ನ ಧ್ಯಾನಕ್ಕೆ ಸರಿಯುಂಟೆ ಪುರಂದರ ವಿಠಲ ||